ಸ್ನೇಹಿತರೆ ನಿಮ್ಮ ಮನೆಯಲ್ಲಿ ಕೂಡ ಪಿತ್ರಾರ್ಜಿತ ಆಸ್ತಿ ಇದ್ದು ಆ ಆಸ್ತಿಯಲ್ಲಿ ನೀವು ಪಾಲು ಪಡೆದುಕೊಳ್ಳಬೇಕು ಅಂತ ಅಂದುಕೊಂಡಿದ್ದರೆ ನೀವು ಭಾರತ ಸರ್ಕಾರದ ಈ ನಿಯಮ ತಿಳಿದುಕೊಳ್ಳುವುದು ಅತಿ ಕಡ್ಡಾಯವಾಗಿದೆ ಹೌದು ಸ್ನೇಹಿತರೆ ಕೆಲವು ಸಂದರ್ಭದಲ್ಲಿ ಹೆಣ್ಣು ಮಗಳಾದವಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ರೀತಿಯ ಪಾಲು ಸಿಗುವುದಿಲ್ಲ ಹಾಗಾದರೆ ಭಾರತೀಯ ಕಾನೂನಿನ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಗಳಾದವಳಿಗೆ ಯಾವಾಗ ಪಾಲು ಸಿಗಲ್ಲ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿಕೊಡ್ತೀವಿ ವಿಡಿಯೋ ತುಂಬಾ ಇನ್ಫಾರ್ಮೇಟಿವ್ ಆಗಿದೆ ಎಲ್ಲೂ ಸ್ಕಿಪ್ ಮಾಡಿದೆ ನೋಡಿ ಹಾಗೂ ಈ ಮಾಹಿತಿಯನ್ನ ಪ್ರತಿಯೊಬ್ಬ ಹೆಣ್ಣು ಮಗಳಿಗೆ ಶೇರ್ ಮಾಡಿ ಸ್ನೇಹಿತರೆ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಆಸ್ತಿಯನ್ನ ಎರಡು ವಿಧಗಳಾಗಿ ವಿಂಗಡನೆ ಮಾಡಲಾಗಿದೆ ಒಂದು ಪಿತ್ರಾರ್ಜಿತ ಆಸ್ತಿ ಇನ್ನೊಂದು ಸ್ವಯಾರ್ಜಿತ ಆಸ್ತಿ ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳಾದವರು ಜನ್ಮಸಿದ್ಧ ಹಕ್ಕನ್ನ ಪಡೆದುಕೊಂಡು ಬರುತ್ತಾರೆ ಆದರೆ ಸ್ವಯಾರ್ಜಿತ ಆಸ್ತಿಯಲ್ಲಿ ಯಾವುದೇ ರೀತಿಯ ಹಕ್ಕು ಇರುವುದಿಲ್ಲ ಹೆಣ್ಣು ಮಗಳಾದವಳು ಕೆಲವು ಸಂದರ್ಭದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಕೂಡ ಪಾಲು ಪಡೆದುಕೊಳ್ಳಲು ಸಾಧ್ಯವಿಲ್ಲ ಉದಾಹರಣೆಗೆ ಪಿತ್ರಾರ್ಜಿತ ಆಸ್ತಿಯು 2005ಕ್ಕೂ ಮೊದಲೇ ವಿಭಾಗವಾಗಿದ್ದರೆ 2005ಕ್ಕೂ ಮೊದಲು ಪಿತ್ರಾರ್ಜಿತ ಆಸ್ತಿ ವಿಭಾಗ ಆಗಿದ್ದರೆ ಆ ಆಸ್ತಿಯಲ್ಲಿ ಹೆಣ್ಣು ಮಗಳಾದವಳು ಯಾವುದೇ ರೀತಿಯ ಹಕ್ಕು ಪಡೆದುಕೊಳ್ಳಲು ಸಾಧ್ಯವಿಲ್ಲ 2005ರ ನಂತರ ಪಿತ್ರಾಜಿತ ಆಸ್ತಿ ವಿಭಾಗವಾಗಿದ್ದರೆ ಮಾತ್ರ ಹೆಣ್ಣು ಮಕ್ಕಳು ಆ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಬಹುದು ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ 2005ರಲ್ಲಿ ತಿದ್ದುಪಡೆಯನ್ನ ಮಾಡಲಾಗಿದೆ. ಈ ಕಾರಣಗಳಿಂದ 2005 ಕ್ಕೂ ಮೊದಲು ಪಿತ್ರಾರ್ಜಿತ ಆಸ್ತಿ ವಿಭಾಗವಾಗಿದ್ದರೆ ಆ ಆಸ್ತಿಯಲ್ಲಿ ಹೆಣ್ಣು ಮಕ್ಕಳಾದವರು ಯಾವುದೇ ರೀತಿಯ ಪಾಲು ಪಡೆದುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ವಿಲ್ ಬರೆದಿಟ್ಟಿದ್ದರು ಕೂಡ ಹೆಣ್ಣು ಮಕ್ಕಳಾದವರು ಯಾವುದೇ ರೀತಿಯ ಪಾಲು ಪಡೆದುಕೊಳ್ಳಲು ಸಾಧ್ಯವಿಲ್ಲ. ತಂದೆಯಾದವನು ಜೀವಂತವಾಗಿರುವಾಗಲೇ ಮಗಳನ್ನು ಬಿಟ್ಟು ರಿಜಿಸ್ಟರ್ ವಿಲ್ ಬರೆದಿಟ್ಟಿದ್ದರೆ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳಾದವರು ಆ ಆಸ್ತಿಯಲ್ಲಿ ಯಾವುದೇ ರೀತಿಯ ಪಾಲು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುವ ಮೊದಲು ಆಸ್ತಿಗೆ ಸಂಬಂಧಪಟ್ಟಂತೆ ಯಾವುದಾದರೂ ವಿಲ್ ಬರೆಯಲಾಗಿದೆಯ ಅನ್ನೋದನ್ನ ತಿಳಿದುಕೊಳ್ಳಬೇಕು. ಅದೇ ರೀತಿಯಲ್ಲಿ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಹೆಣ್ಣು ಮಗಳಾದವಳು ಬೇರೆ ಧರ್ಮಕ್ಕೆ ಮತಾಂತರವಾಗಿದ್ದರೆ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಹೆಣ್ಣು ಮಗಳಾದವಳಿಗೆ ಪಿತ್ರಾರ್ಜಿತ ಅಸ್ತಿಯಲ್ಲಿ ಯಾವುದೇ ರೀತಿಯ ಪಾಲು ಸಿಗಲ್ಲ. ಹೆಣ್ಣು ಮಗಳಾದವಳು ಕ್ರಿಶ್ಚಿಯನ್ ಅಥವಾ ಬೇರೆ ಧರ್ಮಕ್ಕೆ ಮತಾಂತರವಾದರೆ ಆಕೆ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಯಾವುದೇ ರೀತಿಯ ಪಾಲು ಪಡೆದುಕೊಳ್ಳಲು ಸಾಧ್ಯವಿಲ್ಲ. ಕ್ರಿಶ್ಚಿಯನ್ ಆಗಿರಬಹುದು ಮುಸ್ಲಿಂ ಆಗಿರಬಹುದು ಅಥವಾ ಬೇರೆ ಯಾವುದೇ ಧರ್ಮವಾಗಿರಬಹುದು ಆಸ್ತಿ ಹಂಚಿಕೆ ನಿಯಮದಲ್ಲಿ ಬೇರೆ ಬೇರೆ ಕಾನೂನನ್ನ ಅಳವಡಿಸಲಾಗಿದೆ. ಈ ಎಲ್ಲಾ ಸಂದರ್ಭದಲ್ಲಿ ಹೆಣ್ಣು ಮಗಳಾದವಳು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಲು ಸಾಧ್ಯವಿಲ್ಲ. ಹಿಂದೂ ಉತ್ತರಾಧಿಕಾರಿ ಕಾಯ್ದೆ ಅಡಿಯಲ್ಲಿ ಪಾಲು ಪಡೆದುಕೊಳ್ಳಬೇಕಾದರೆ ಹೆಣ್ಣು ಮಗಳಾದವಳು ಈ ನಿಯಮವನ್ನ ಕಡ್ಡಾಯವಾಗಿ ತಿಳಿದುಕೊಳ್ಳಬೇಕು